Tuesday, 3 January 2017

ಲಾಭ ಮತ್ತು ನಷ್ಟ: (Profit & Loss)

ಕೆಳಗಿನ ಸಮಸ್ಯೆಗಳಿಗೆ  ನಿಮ್ಮ ಸಲಹೆ/ಉತ್ತರ ಏನು?    

1.  ನಿಮಗೊಬ್ಬ ವ್ಯಾಪಾರಿ ಸ್ನೇಹಿತನಿದ್ದಾನೆಅವನು ಇತರ ಸಾಮಾನುಗಳ ಜೊತೆಗೆ ಚಾಕಲೇಟುಗಳನ್ನು ಮತ್ತು ಬಿಸ್ಕತ್ತನ್ನೂ ಮಾರಾಟ ಮಾಡುತ್ತಾನೆ.

1. ಅವನು 10 ರೂ.ಗಳಿಗೆ ತೆಗೆದುಕೊಂಡ ಚಾಕಲೇಟ್ ಬಾರ್ನ್ನ 11ರೂ.ಗಳಿಗೆ ಮಾರುತ್ತಾನೆ.
2. 20 ರೂ.ಗಳಿಗೆ ತೆಗೆದುಕೊಂಡ ಬಿಸ್ಕತ್ ಪ್ಯಾಕೇಟನ್ನು 23 ರೂ.ಗಳಿಗೆ ಮಾರುತ್ತಾನೆ.
ಅವನಿಗೆ ಹೆಚ್ಚಿಗೆ ಲಾಭ ಬೇಕಿದೆಅದಕ್ಕಾಗಿ ಅವನಿಗೆ ಹೆಚ್ಚು ಬಿಸ್ಕತ್ತುಗಳನ್ನ ಮಾರಬೇಕೋಹೆಚ್ಚು ಚಾಕಲೇಟುಗಳನ್ನು ಮಾರಬೇಕೋ ಗೊತ್ತಾಗುತ್ತಿಲ್ಲಆಗ ನೀವು ಹೆಚ್ಚು ಚಾಕಲೇಟು ಮಾರಲು ಹೇಳುತ್ತೀರೋಇಲ್ಲ ಬಿಸ್ಕತ್ತು ಮಾರಲುಹೇಳುತ್ತೀರೋ?
2.         ಒಬ್ಬ ತೆಂಗಿನ ಕಾಯಿ ವ್ಯಾಪಾರಿಯು 1000 ತೆಂಗಿನ ಕಾಯಿಗಳನ್ನು 6000ರೂ.ಗಳಿಗೆ ಕೊಂಡನುಅವುಗಳಲ್ಲಿ 100 ಕಾಯಿಗಳು ಹಾಳಾದವುಉಳಿದ ತೆಂಗಿನ ಕಾಯಿಗಳನ್ನು ಅವನು ತಲಾ ರೂ.5 ರಂತೆ ಮಾರಿದರೆಅವನಿಗೆಲಾಭವಾಯಿತೇ ಇಲ್ಲ ಅಥವಾ ನಷ್ಟವಾಯಿತೇ?


ಕಲಿತ ಸಾರಾಂಶ

ಕ್ರ.ಸಂ.
ಕಲಿತ ಮುಖ್ಯಾಂಶಗಳು
1
ಲಾಭ = ಮಾರಿದ ಬೆಲೆ - ಅಸಲುಬೆಲೆ (SP>CP ಆದಾಗ)
2
ನಷ್ಟ = ಮಾರಿದ ಬೆಲೆ - ಅಸಲು ಬೆಲೆ (SP<CP ಆದಾಗ)
3
ಶೇಕಡಾ ಲಾಭ = ಲಾಭ *100÷ ಅಸಲು ಬೆಲೆ
4
ಶೇಕಡಾ ನಷ್ಟ = ನಷ್ಟ *100÷ ಅಸಲು ಬೆಲೆ
5
ಅಸಲು ಬೆಲೆ =100* ಮಾರಿದ ಬೆಲೆ ÷(100+ ಶೇಕಡಾ ಲಾಭ)  (ಲಾಭವಾದಾಗ)
6
ಅಸಲು ಬೆಲೆ =100* ಮಾರಿದ ಬೆಲೆ ÷(100- ಶೇಕಡಾ ನಷ್ಟ)    (ನಷ್ಟವಾದಾಗ)
7
ಮಾರಿದ ಬೆಲೆ = (100+ ಶೇಕಡಾ ಲಾಭ)* ಅಸಲು ಬೆಲೆ ÷100  (ಲಾಭವಾದಾಗ)
8
ಮಾರಿದ ಬೆಲೆ = (100- ಶೇಕಡಾ ನಷ್ಟ)* ಅಸಲು ಬೆಲೆ ÷100    (ನಷ್ಟವಾದಾಗ)

ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎದುರಿಸುವ ಇಂತಹ ಸಮಸ್ಯೆಗಳಿಗೆ ಉತ್ತರ ಇಲ್ಲಿ ಮತ್ತು ಮುಂದಿನ ಪಾಠಗಳಲ್ಲಿ  ಕಲಿಯೋಣ.

No comments:

Post a Comment